== ನಾಸಾದ ದೊಡ್ಡ ದೂರದರ್ಶಕ == ಜಗತ್ತಿನ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕದ (ಟೆಲಿಸ್ಕೋಪ್‌) ನಿರ್ಮಾಣ ಕಾರ್ಯವನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಪೂರ್ಣಗೊಳಿಸಿದೆ. ಅತ್ಯಾಧುನಿಕ ದೂರದರ್ಶಕವು ಅತಿ ಸೂಕ್ಷ್ಮಗ್ರಾಹಿ ‘ಇನ್ಫ್ರಾರೆಡ್‌’ ಕ್ಯಾಮೆರಾಗಳನ್ನು ಹೊಂದಿದೆ. ಇವುಗಳನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಚಿಪ್ಪಿನಂತೆ ವಿಶೇಷ ರಕ್ಷಾ ಕವಚ ನಿರ್ಮಿಸಲಾಗಿದೆ. ಬಾಹ್ಯಾಕಾಶದಲ್ಲಿ ಶೋಧನ ಕಾರ್ಯಗಳಿಗೆ ಬಳಕೆಯಾಗುತ್ತಿರುವ ಹಬಲ್‌ ದೂರದರ್ಶಕಕ್ಕಿಂತ 100 ಪಟ್ಟು ಪ್ರಬಲವಾದ ದೂರದರ್ಶಕವನ್ನು ನಾಸಾ ಸಿದ್ಧಪಡಿಸಿದೆ. 26 ವರ್ಷಗಳಷ್ಟು ಹಳೆಯದಾದ ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕಕ್ಕಿಂತ ‘ಜೇಮ್ಸ್‌ ವೆಬ್‌’ ಹೆಚ್ಚು ಸಮರ್ಥವಾಗಿದ್ದು, ಜಗತ್ತಿನ ಸೃಷ್ಟಿಯಲ್ಲಿನ ಮೊದಲ ಗ್ಯಾಲಕ್ಸಿಗಳನ್ನು ಪತ್ತೆ ಮಾಡಲು ಅನುವಾಗಲಿದೆ.(ಚಿತ್ರ:[[೧]]) ಟೆನಿಸ್‌ ಕೋರ್ಟ್‌ ಗಾತ್ರದಷ್ಟಿರುವ ಈ ರಕ್ಷಾ ಕವಚವು ಐದು ಅತಿ ತೆಳ್ಳನೆಯ (ತಲೆಕೂದಲಿನಷ್ಟು) ಪದರಗಳನ್ನು ಹೊಂದಿದೆ. ಕ್ಯಾಮೆರಾದಲ್ಲಿರುವ ‘ಇನ್ಫ್ರಾರೆಡ್‌ ಸೆನ್ಸರ್‌’ಗಳನ್ನು ಸೂರ್ಯನ ಅತಿಯಾದ ಶಾಖದಿಂದ ಇದು ರಕ್ಷಿಸುತ್ತದೆ. ದೂರದರ್ಶಕದ ಉಷ್ಣತೆಯನ್ನು ಕನಿಷ್ಠ –298 ಡಿಗ್ರಿ ಸೆಲ್ಸಿಯಸ್‌ ಮತ್ತು ಗರಿಷ್ಠ 298 ಡಿಗ್ರಿ ಸೆಲ್ಸಿಯಸ್‌ ನಡುವೆ ನಿಯಂತ್ರಿಸಲು ಈ ಐದು ಪದರಗಳ ಕವಚಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಪ್ರತಿ ಪದರವನ್ನು ‘ಕಪ್ಟಾನ್‌’ ಎಂಬ ವಸ್ತುವಿನಿಂದ ತಯಾರಿಸಲಾಗಿದೆ. ಅತ್ಯಂತ ಹೆಚ್ಚು ಉಷ್ಣತೆಯನ್ನು ನಿಗ್ರಹಿಸುವ ಸಾಮರ್ಥ್ಯ ಇದಕ್ಕಿದೆ. ಉಡಾವಣೆ ಸಂದರ್ಭದಲ್ಲಿನ ವಾತಾವರಣವನ್ನು ತಾಳಿಕೊಳ್ಳುವ ರೀತಿಯಲ್ಲಿ ‘ಜೇಮ್ಸ್‌ ವೆಬ್‌’ ವಿನ್ಯಾಸ ಮಾಡಲಾಗಿದೆ. ಆದರೆ, ಅದನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. 26 ವರ್ಷಗಳಷ್ಟು ಹಳೆಯದಾದ ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕಕ್ಕಿಂತ ‘ಜೇಮ್ಸ್‌ ವೆಬ್‌’ ಹೆಚ್ಚು ಸಮರ್ಥವಾಗಿದ್ದು, ಜಗತ್ತಿನ ಸೃಷ್ಟಿಯಲ್ಲಿನ ಮೊದಲ ಗ್ಯಾಲಕ್ಸಿಗಳನ್ನು ಪತ್ತೆ ಮಾಡಲು ಅನುವಾಗಲಿದೆ. == ಇತಿಹಾಸ == == ಜೇಮ್ಸ್‌ ವೆಬ್‌ ಕೆಲಸ == ಈ ದೂರದರ್ಶಕಕ್ಕೆ "ಜೇಮ್ಸ್‌ವೆಬ್" ಎಂದು ಹೆಸರಿಡಲಾಗಿದೆ. ಬ್ರಹ್ಮಾಂಡ ಉಗಮದ ನಂತರ ಸೃಷ್ಟಿಯಾದ ತಾರಾಗುಚ್ಛಗಳ (ಗೆಲಾಕ್ಸಿ) ಪತ್ತೆಗಾಗಿ ಈ ದೂರದರ್ಶಕವನ್ನು ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ. ಜತೆಗೆ ದೂರದಲ್ಲಿರುವ ನಕ್ಷತ್ರಗಳನ್ನು ಸುತ್ತುಹಾಕುತ್ತಿರುವ ಗ್ರಹಗಳ ಅನ್ವೇಷಣೆಗೂ ಇದನ್ನು ಬಳಸಿಕೊಳ್ಳಲಾಗುತ್ತದೆ. == ವೈಶಿಷ್ಟ್ಯಗಳು == ಹಬಲ್‌ ದೂರದರ್ಶಕಕ್ಕಿಂತ 100 ಪಟ್ಟು ಹೆಚ್ಚು ಸಾಮರ್ಥ್ಯ 26 ವರ್ಷಗಳಷ್ಟು ಹಳೆಯ ಹಬಲ್‌ ದೂರದರ್ಶಕದ ಉತ್ತರಾಧಿಕಾರಿ ನಿರ್ಮಾಣ ಕಾರ್ಯದಲ್ಲಿ ಯುರೋಪ್‌ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆಗಳ ನೆರವು ಇನ್‌ಫ್ರಾರೆಡ್‌ ಕ್ಯಾಮೆರಾ ರಕ್ಷಣೆಗೆ ಐದು ಪದರಗಳ ಟೆನಿಸ್‌ ಕೋರ್ಟ್‌ ಗಾತ್ರದ ರಕ್ಷಾ ಕವಚ == ಫೋಟೊಗಳು == == ವಿವರಗಳು == == ವಾಸ್ತವ ಗಾತ್ರದ ದೂರದರ್ಶಕದ ಮಾದರಿ == == ನೋಡಿ == ಹಬಲ್ ದೂರದರ್ಶಕ ಶೆಂಝೌ–11 (ಚೀನಾದ ಬಾಹ್ಯಾಕಾಶ ನೌಕೆ) == ಉಲ್ಲೇಖ == == ಹೊರಕೊಂಡಿಗಳು == ಲೇ: ನಾಗೇಶ ಹೆಗಡೆ, ನಭೋಮಂಟಪಕ್ಕೆ ತಾರಾತೋರಣ, ಪ್ರಜಾವಾಣಿ, ೧೭ ಜುಲೈ ೨೦೨೨ ಜೇಮ್ಸ್ ವೆಬ್ ಟೆಲಿಸ್ಕೋಪ್, ನಾಸಾ ಜಾಲತಾಣ